Glock in my purse lil uzi vert lyrics

Song: APPA I LOVE YOU
Singer: ANURADHA BHAT
Music: ARJUN JANYA
Lyric: DR.V. NAGENDRA PRASAD
Film: CHOWKA
ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದೂಗಾರ ಅಪ್ಪ
ಹಗಲು ಬೆವರಿನ ಕೂಲಿಕಾರ
ರಾತ್ರಿ ಮನೆಯಲಿ ಚೌಕಿದಾರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪ
ಗದರೋ ಮೀಸೆಕಾರ ಮನಸೇ ಕೋಮಲ
ನಿನ್ನ ಹೋಲೊ ಕರ್ಣ ಯಾರಿಲ್ಲ
ಅಪ್ಪ… ಐ ಲವ್ ಯೂ ಪಾ
ಅಪ್ಪ… ಐ ಲವ್ ಯೂ ಪಾ
ಅಪ್ಪ… ಐ ಲವ್ ಯೂ ಪಾ
ಅಪ್ಪ… ಐ ಲವ್ ಯೂ ಪಾ
ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದೂಗಾರ ಅಪ್ಪ
ಬೆರಳನ್ನು ಹಿಡಿದರೆ ವಿಶ್ವಾಸವು ಬೆಳೆವುದು
ಹೆಗಲಲ್ಲಿ ಕುಳಿತರೆ ಕುತೂಹಲ ತಣಿವುದು
ನಾನು ಓದೋ ಪಾಠದಲಿ ಅದು ಯಾಕೆ ನಿನ್ನ ಹೆಸರಿಲ್ಲ ನಿನ್ನ ಹಾಗೆ ಯಾಕೆ ಯಾರಿಲ್ಲ
ನೀನು ಇರುವ ಧೈರ್ಯದಲ್ಲಿ ಯಾರೊಂದಿಗೂ ನಾ ಸೋಲಲ್ಲ ನಿನ್ನ ಪ್ರೀತಿ ಮುಂದೆ ಏನಿಲ್ಲ
ಅಪ್ಪ… ಐ ಲವ್ ಯೂ ಪಾ
ಅಪ್ಪ… ಐ ಲವ್ ಯೂ ಪಾ
ಅಪ್ಪ… ಐ ಲವ್ ಯೂ ಪಾ
ಅಪ್ಪ… ಐ ಲವ್ ಯೂ ಪಾ
ನಿನ್ನ ಅಂಗಿ ಬೆವರಲಿ ನಮ್ ಅನ್ನ ಅಡಗಿದೆ
ಮಗಳೇ ಅನ್ನೋ ಮಾತಿನಲಿ ನಿನ್ನ ಮಮತೆ ತಿಳಿದಿದೆ
ತಾಯಿ ಮಾತ್ರ ತವರಲ್ಲ ತಂದೆ ಇರದೇ ತಾಯಿಲ್ಲ ಆಕಾಶದಂತೆ ನಿನ್ನ ಮನಸ್ಸಪ್ಪ
ನಾನು ಎಂದೂ ಹೇಳಿಲ್ಲ ಯಾಕಂತ ನಂಗು ತಿಳಿದಿಲ್ಲ ನೀನು ಅಂದ್ರೆ ಅಚ್ಚು ಮೆಚ್ಚಪ್ಪ
ಅಪ್ಪ ಐ ಲವ್ ಯೂ ಪಾ
ಅಪ್ಪ… ಐ ಲವ್ ಯೂ ಪಾ
ಅಪ್ಪ… ಐ ಲವ್ ಯೂ ಪಾ
ಅಪ್ಪ… ಐ ಲವ್ ಯೂ ಪಾ
ಎಲ್ಲ ಕೊಡಿಸುವ ಸಾಹುಕಾರ ಅಪ್ಪ
Comments
Post a Comment